Kannada actor Devaraj playing an important role in 'The Villain' movie. Actor Sudeep and Shiva Rajkumar starrer Kannada Movie 'The Villain' movie is directed by Jogi Prem. <br /> <br />'ದಿ ವಿಲನ್' ಸಿನಿಮಾ ಕಳೆದ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿತ್ತು. ಆದರೆ ಆ ಸಿನಿಮಾದ ಮೇಲೆ ಇದ್ದ ನಿರೀಕ್ಷೆ ಈ ವರ್ಷಕ್ಕೂ ಮುಂದುವರೆದಿದೆ. ಸಿನಿಮಾ ಶುರುವಾದ ಪ್ರತಿ ಹಂತದಲ್ಲಿಯೂ ದೊಡ್ಡ ಸದ್ದು ಮಾಡುತ್ತಿದ್ದ 'ದಿ ವಿಲನ್ ಇದೀಗ ಮತ್ತೆ ಸುದ್ದಿ ಮಾಡಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಇಬ್ಬರು 'ದಿ ವಿಲನ್' ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಆಮಿ ಜಾಕ್ಸನ್ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಇವುಗಳ ಜೊತೆಗೆ ಈಗ ಕನ್ನಡದ ಇನ್ನೊಬ್ಬ ನಟ ಕೂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ದಿ ವಿಲನ್' ಸಿನಿಮಾದ ಮುಂದಿನ ಹಂತದ ಚಿತ್ರೀಕರಣ ಇಂದಿನಿಂದ ಶುರು ಆಗಿದ್ದು, ಶೂಟಿಂಗ್ ನಲ್ಲಿ ಆ ನಟ ಕೂಡ ಭಾಗಿಯಾಗಿದ್ದಾರೆ. ಮಾತ್ರವಲ್ಲದೆ ತಮಿಳಿನ ಪೋಷಕ ನಟಿ ಕೂಡ ಪ್ರೇಮ್ ಕನಸಿನ ಸಿನಿಮಾ 'ದಿ ವಿಲನ್' ನಲ್ಲಿ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.